ಹೀಗೆ ಓ ದಲಾಗುತ್ತದೋ ಗೊತ್ತಿಲ್ಲ. ಆಗದಿದ್ದರೆ ಈ ಕೊಂಡಿ ಹಿಡಿದು ಸಾಗಿ.http://www.vijaykarnatakaepaper.com//svww_zoomart.php?Artname=20110102l_002101001&ileft=760&itop=53&zoomRatio=130&AN=20110102l_002101001
The woods are lovely, dark & deep, But I have promises to keep, Miles to go before I sleep... ROBERT FROST
ಹೀಗೆ ಓ ದಲಾಗುತ್ತದೋ ಗೊತ್ತಿಲ್ಲ. ಆಗದಿದ್ದರೆ ಈ ಕೊಂಡಿ ಹಿಡಿದು ಸಾಗಿ.
ತಿಂಗಳು. ನಸುಕು ಹರಿಯುವ ಹೊತ್ತಿಗೆ ನಾನು ಬೆಂಗಳೂರಿನ ಮೆಜೆಸ್ಟಿಕ್ ಎಂಬೋ ಗಡಿಬಿಡಿಗೆ ತಲುಪಿಯಾಗಿತ್ತು. ಆದರೆ ಇನ್ನೂ ಆರು ಗಂಟೆಯಾದ್ದರಿಂದ ಮಹಾನಗರಿ ತನ್ನನ್ನು ಅಷ್ಟೇನೂ ಗಡಿಬಿಡಿ ಮಾಡಿಕೊಂಡಿರಲಿಲ್ಲ. ಮೊದಲು ಬಿಎಂಟಿಸಿ ಬಸ್ಟ್ಯಾಂಡಿತ್ತ ಹೋಗಿ ಅಲ್ಲೊಂದು ನಳ್ಳಿಯ ಬುಡದಲ್ಲಿ ಮುಖ ತೊಳೆದುಕೊಳ್ಳುವ ಶಾಸ್ತ್ರ ಮಾಡಿದೆ. ಹತ್ತು ಹೆಜ್ಜೆ ನಡೆದು ಒಂದು ಕ್ಯಾಂಟೀನ್ ಹೊಕ್ಕು ನನ್ನ ಪರ್ಸಿನ ಫೇವರಿಟ್ ಆಗಿದ್ದ ಪ್ಲೇಟ್ ಇಡ್ಲಿ-ಮಿನಿ ಕಾಫಿ ಕುಡಿದು ಹೊರಬಂದೆ.

(My sincere thanks to our photojournalist Mr Chandrahas Kotekar for his beautiful photographs)
ಸ್ಟ್ರು ನೂರಕ್ಕೊಬ್ಬರು ಎಂದು ನನಗನಿಸಿತ್ತು. ಅವರ ಪತ್ನಿಯೂ ಅಧ್ಯಾಪಕಿ. ಇಬ್ಬರೂ ತುಂಬ ಸಾತ್ವಿಕರು, ಸಾಧು ಸ್ವಭಾವದವರು. ರಾತ್ರಿ ಹತ್ತೂವರೆಗೆ ಯಾರಾದರೂ ನಮ್ಮ ಹತ್ತಿರ ಮಾತಾಡುವುದಕ್ಕೆಂದು ಫೋನಾಯಿಸಿದರೂ ಅವರು ಒಂದು ಫರ್ಲಾಂಗು ದೂರವಿರುವ ನಮ್ಮ ಮನೆಗೆ ದೌಡಾಯಿಸುತ್ತಿದ್ದರು ಇಲ್ಲವೇ ತಮ್ಮ ಮಕ್ಕಳಲ್ಲೊಬ್ಬರನ್ನು ಕಳಿಸುತ್ತಿದ್ದರು. ವಾರಕ್ಕೊಮ್ಮೆಯಾದರೂ ನಾವೆಲ್ಲ ಅವರ ಮನೆಯಲ್ಲಿ ಸೇರುವುದಿತ್ತು. ರಜೆ ದಿನ ಪೇಪರು ಓದುವುದಕ್ಕೆಂದು ನಾನವರಲ್ಲಿಗೆ ಹೋಗುತ್ತಿದ್ದೆ. ವರ್ಷದಲ್ಲೊಂದು ದಿನ (ಬಹುಶಃ ದೀಪಾವಳಿಗೆ) ಮಾಸ್ಟ್ರ ಮನೆಯಲ್ಲಿ ನಮಗೊಂದು ಖಾಯಂ ಔತಣ. ಸಾಯಿ ಮಂದಿರದಲ್ಲಿದ್ದ ಅಷ್ಟೂ ಮಂದಿಯನ್ನು ಖುದ್ದು ಆಹ್ವಾನಿಸಿ ಅಧ್ಯಾಪಕ ದಂಪತಿ ತಾವೇ ತಯಾರಿಸಿದ ವಿಶೇಷ ಅಡುಗೆಯನ್ನು ಉಣಬಡಿಸುತ್ತಿದ್ದರು. ನಾವು ಪಿ.ಜಿ. ಮುಗಿಸುವ ಕೊನೆಯ ದಿನಗಳಲ್ಲಿ ಗಂಗಾಧರ ಮಾಸ್ಟ್ರು ತುಂಬ ಕುಗ್ಗಿದ್ದರು. ಕಾರಣ, ದೂರದ ಶಿರ್ಲಾಲಿಗೆ ಅವರಿಗೆ ವರ್ಗ ಆಗುವುದರಲ್ಲಿತ್ತು. ಅವರ ಮನೆಯಿಂದ ಶಿರ್ಲಾಲಿಗೆ ಏನಿಲ್ಲವೆಂದರೂ ೮೦-೯೦ ಕಿ.ಮೀ. ದೂರ. ಪ್ರತಿದಿನ ಮೂರು-ನಾಲ್ಕು ಬಸ್ಸು ಹಿಡಿದು ಅಷ್ಟು ದೂರ ಹೋಗಿ ಬರುವುದು ಕನಸಿನ ಮಾತು. ಹಾಗಂತ ಮಾಸ್ಟ್ರು ಮನೆ ಶಿಫ್ಟ್ ಮಾಡುವಂತಿರಲಿಲ್ಲ. ಅವರು ಫಜೀರಿನಲ್ಲಿ ಸೆಟ್ಲ್ ಆಗಿದ್ದರು. ಅವರ ಪತ್ನಿ ಅಲ್ಲೇ ಪಕ್ಕದ ಶಾಲೆಯೊಂದರಲ್ಲಿ ಅಧ್ಯಾಪನ ಮಾಡುತ್ತಿದ್ದರು. ಇಬ್ಬರು ಮಕ್ಕಳೂ ಅಲ್ಲೇ ಪ್ರೈಮರಿ-ಹೈಸ್ಕೂಲ್ ಓದುತ್ತಿದ್ದರು. ಇಷ್ಟು ಜವಾಬ್ದಾರಿಯಿದ್ದುದರಿಂದ ಶಿರ್ಲಾಲಿನಲ್ಲೇ ಒಂದು ರೂಮು ಮಾಡಿ ಅವರು ಒಬ್ಬರೇ ಇರುವಂತೆಯೂ ಇರಲಿಲ್ಲ. ಟ್ರಾನ್ಸ್‌ಫರ್ ಬೇಡವೆಂದರೆ ತಾನಾಗಿ ಒದಗಿಬಂದ ಪ್ರಮೋಶನೂ ಕೈತಪ್ಪುತ್ತದೆ. ಇನ್ನೇನು ದಾರಿಯೆಂದು ಮಾಸ್ಟ್ರು ತುಂಬ ಚಿಂತಿತರಾಗಿದ್ದರು. ಆ ಬಗ್ಗೆ ಏನು ಮಾಡಬಹುದೆಂದು ನಮ್ಮೊಂದಿಗೆ ಹಲವು ಬಾರಿ ಚರ್ಚಿಸಿಯೂ ಇದ್ದರು. ‘ಬೇರೆ ಕಡೆ, ಸ್ವಲ್ಪ ಹತ್ತಿರಕ್ಕೆ ವರ್ಗಾವಣೆ ಸಿಗುತ್ತದೋ ನೋಡಬಹುದು’ ಎಂದು ಹೇಳುವುದರ ಹೊರತಾಗಿ ನಮಗೂ ಏನೂ ಹೊಳೆಯುತ್ತಿರಲಿಲ್ಲ.
... ಕಡಲ ಪುಂಡಾಟಿಕೆ ಏರುತ್ತಿರುವುದು ನೋಡಿದರೆ ಇನ್ನೆರಡು ದಿನಗಳಲ್ಲಿ ತಾವೆಲ್ಲರೂ ಗೋರ್ಮೆಂಟಿನ ಗಂಜಿಕೇಂದ್ರದಲ್ಲಿ ಠಿಕಾಣಿ ಹೂಡುವ ಪರಿಸ್ಥಿತಿ ಬರುವುದು ನಿಶ್ಚಯವೆಂದೆನಿಸಿತು ಯಾದವನಿಗೆ. ಈಗಲೇ ದಿನಬೆಳಗಾದರೆ ಹಸಿಮೀನಿಗೆ ಮುತ್ತುವ ಕಾಗೆಗಳ ಥರ ಸಾಲೋಸಾಲು ಬಂದು ಫೋಟೋ ತೆಗೆಯುವ ಪೇಪರಿನವರ ಅವಸ್ಥೆ ಹೇಳಿ ಪ್ರಯೋಜನವಿಲ್ಲ. ’ಎಷ್ಟು ವರ್ಷದಿಂದ ಈ ಥರ ಇದೆ? ಈ ವರ್ಷ ಎಷ್ಟು ತೆಂಗಿನ ಮರ ಹೋಯ್ತು? ಪರಿಹಾರ ಸಿಕ್ಕಿತಾ? ಈ ಸರ್ತಿ ಎಷ್ಟು ಲೋಡು ಕಲ್ಲು ಹಾಕಿದ್ದಾರೆ ದಂಡೆಗೆ?’ ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳಿಗೆ ಯಾದವ ಮತ್ತವನ ನೆರೆಹೊರೆಯವರು ನೂರಾರು ಬಾರಿ ಉತ್ತರ ಹೇಳಿರಬಹುದು. ಕೆಲವು ಕೆಮರಾದವರಂತೂ ಫೋಟೋ ತೆಗೆಯಲಿಕ್ಕಂತಲೇ ಅರ್ಧ ಚಿಂದಿಯಾದ ಜೋಪಡಿ, ದೋಣಿಗಳ ಪಕ್ಕ ಪುಟ್ಟ ಮಕ್ಕಳನ್ನೋ ಹೆಂಗಸರನ್ನೋ ಕರೆದು ನಿಲ್ಲಿಸುವ ಆತುರ ನೋಡಿ ’ಮನುಷ್ಯತ್ವ ಇಲ್ಲಾ ಇವರಿಗೆ? ಪರಿಕ್ಕಟೆ ಮನೆ ಹತ್ರ ನಿಲ್ಲಿಸಿ ಕಣ್ಣೀರು ಕಾಕಿದ್ರೆ ಫೋಟೋದಲ್ಲಿ ಭಾರಿ ಚಂದವಾ?’ ಎಂದು ಎಷ್ಟೋ ಸಲ ಶಪಿಸಿಕೊಂಡಿದ್ದ ಯಾದವ. ನಾಳೆ ನಾಡಿದ್ದು ಗಂಜಿ ಕೇಂದ್ರಕ್ಕೆ ನಾವೂ ರವಾನೆಯಾಗ್ತೇವೆ, ಅಲ್ಲಿ ಮಕ್ಕಳು ಮರಿಗಳೆಲ್ಲ ಸೇರಿ ತಟ್ಟೆ ಹಿಡಿಯೋ ಹೊತ್ತಿಗೇ ಈ ಎಮ್ಮೆಲ್ಲೆ ಮಂತ್ರಿಗಳಿಗೆ ಬರೋ ಪುರುಸೊತ್ತಾಗುತ್ತೆ. ಅವರು ನಮ್ಮ ಅವಸ್ಥೆ ಅವ್ಯವಸ್ಥೆ ಕಂಡು ಬೇಜಾರಾಗಿ ಕಣ್ಣೀರು ಸುರಿಸೋ ಸಮಯಕ್ಕೆ ಸರಿಯಾಗಿ ಕೆಮರಾದವರು ಫೋಟೋ ತೆಗೀತಾರೆ. ಮರುದಿನ ಪೇಪರುಗಳಲ್ಲಿ ಯಥಾಪ್ರಕಾರ ಸುದ್ದಿ, ಸುದ್ದಿ, ಸುದ್ದಿ... ನಿಡುಸುಯ್ದ ಯಾದವ...