ಇದೇ ಮಾರ್ಚ್ 4 ಹಾಗೂ 5, 2016ರಂದು ನಮ್ಮ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ
ಮಾನವ ಹಕ್ಕುಗಳ ಕುರಿತ ಒಂದು ಅರ್ಥಪೂರ್ಣ ಕಾರ್ಯಕ್ರಮ ಮಾಡಲು ಬಯಸಿದ್ದೇವೆ. ಮಾನವ ಹಕ್ಕುಗಳ ಬಗ್ಗೆ
ಹೊಸ ತಲೆಮಾರಿನಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲು ಯುಜಿಸಿ ನೀಡಿರುವ ಅನುದಾನವನ್ನು ಬಳಸಿಕೊಂಡು
ಒಂದಷ್ಟು ಮಂದಿ ಸಂಪನ್ಮೂಲ ವ್ಯಕ್ತಿಗಳನ್ನು ಒಂದೆಡೆ ಕಲೆಹಾಕುವ ಪ್ರಯತ್ನ ಮಾಡಿದ್ದೇವೆ. ಎರಡು ದಿನಗಳ
ಈ ವಿಚಾರ ಸಂಕಿರಣದ ಬಗ್ಗೆ ಒಂದಷ್ಟು ವಿವರ ಇಲ್ಲಿದೆ ನೋಡಿ:
ವಿಚಾರ ಸಂಕಿರಣದ ವಿಷಯ: ‘ಮಾನವ ಹಕ್ಕುಗಳ ಸಂರಕ್ಷಣೆ: ಸವಾಲುಗಳು ಮತ್ತು ಸಾಧ್ಯತೆಗಳು’
ದಿನಾಂಕ: ಮಾರ್ಚ್ 4 ಹಾಗೂ 5, 2016
ಸ್ಥಳ: ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣ, ತುಮಕೂರು ವಿಶ್ವವಿದ್ಯಾನಿಲಯ
---------------------------------------------------------
ಮಾರ್ಚ್ 4, 2016
ಉದ್ಘಾಟನಾ ಸಮಾರಂಭ: ಬೆಳಗ್ಗೆ 10-00 ಗಂಟೆಗೆ
ಉದ್ಘಾಟನೆ: ಪ್ರೊ. ಎ. ಎಚ್. ರಾಜಾಸಾಬ್, ಕುಲಪತಿಗಳು, ತುಮಕೂರು ವಿಶ್ವವಿದ್ಯಾನಿಲಯ
ಮುಖ್ಯ ಅತಿಥಿಗಳು & ದಿಕ್ಸೂಚಿ ಉಪನ್ಯಾಸ: ಜಸ್ಟೀಸ್ ಎ. ಜೆ. ಸದಾಶಿವ, ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ
ಗೌರವ ಉಪಸ್ಥಿತಿ: ಪ್ರೊ. ಡಿ. ಶಿವಲಿಂಗಯ್ಯ, ಕುಲಸಚಿವರು, ತುಮಕೂರು ವಿಶ್ವವಿದ್ಯಾನಿಲಯ
ಉಪಸ್ಥಿತಿ: ಶ್ರೀ ಬಿ. ಕರಿಯಣ್ಣ, ಉಪಪ್ರಾಂಶುಪಾಲರು, ವಿಶ್ವವಿದ್ಯಾನಿಲಯ ಕಲಾ ಕಾಲೇಜು
ಅಧ್ಯಕ್ಷತೆ: ಡಾ. ಎಂ. ಜಯರಾಮು, ಪ್ರಾಂಶುಪಾಲರು, ವಿಶ್ವವಿದ್ಯಾನಿಲಯ ಕಲಾ ಕಾಲೇಜು
----------------------------------------------------------
ಗೋಷ್ಠಿ – ಒಂದು: ಮಧ್ಯಾಹ್ನ 12-00ರಿಂದ 1-30ವರೆಗೆ
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕುಗಳು
ಡಾ. ನಿರಂಜನಾರಾಧ್ಯ ವಿ. ಪಿ., ಫೆಲೋ, ಸೆಂಟರ್ ಫಾರ್ ಚೈಲ್ಡ್ ಅಂಡ್ ದಿ ಲಾ, ನ್ಯಾಷನಲ್ ಲಾ ಸ್ಕೂಲ್ ಆಫ್
ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು
ಮಕ್ಕಳ ಹಕ್ಕುಗಳ ಸಂರಕ್ಷಣೆಯಲ್ಲಿ ಸಮಾಜದ ಸಹಭಾಗಿತ್ವ
ಎನ್. ವಿ. ವಾಸುದೇವ ಶರ್ಮಾ, ಕಾರ್ಯನಿರ್ವಾಹಕ ನಿರ್ದೇಶಕರು, ಚೈಲ್ಡ್ ರೈಟ್ಸ್ ಟ್ರಸ್ಟ್, ಬೆಂಗಳೂರು
ಗೋಷ್ಠಿ – ಎರಡು: ಅಪರಾಹ್ನ 2-30ರಿಂದ 4-30ರವರೆಗೆ
ಹಿರಿಯ ನಾಗರಿಕರ ಹಕ್ಕು-ಬಾಧ್ಯತೆಗಳು
ಪ್ರೊ. ಬಿ. ಎಸ್. ಲಿಂಗರಾಜು, ನಿರ್ದೇಶಕರು, ಅನನ್ಯ ಇನ್ಸ್’ಟಿಟ್ಯೂಟ್ ಆಫ್ ಕಾಮರ್ಸ್ & ಮ್ಯಾನೇಜ್ಮೇಂಟ್,
ತುಮಕೂರು
ಅಭಿವೃದ್ಧಿ v/s ಮಾನವ ಹಕ್ಕುಗಳು: ರೈತರು ಹಾಗೂ ಗ್ರಾಮೀಣ ಜನತೆಯ ಹಿತರಕ್ಷಣೆ
ಶ್ರೀಮತಿ ವಿದ್ಯಾ ದಿನಕರ್, ಸಾಮಾಜಿಕ ಕಾರ್ಯಕರ್ತರು, ಮಂಗಳೂರು
---------------------------------------------------------
ಮಾರ್ಚ್ 5, 2016 ಶನಿವಾರ
ಗೋಷ್ಠಿ – ಮೂರು: ಬೆಳಗ್ಗೆ 10-00ರಿಂದ 11.30ವರೆಗೆ
ಮಹಿಳೆಯರ ಆರ್ಥಿಕ ಸಬಲೀಕರಣದ ಸವಾಲುಗಳು
ಶ್ರೀಮತಿ ವಾಸಂತಿ ಶಿವಣ್ಣ, ಅಧ್ಯಕ್ಷರು, ಮಹಿಳಾ ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರ
ಗ್ರಾಮೀಣ ಆರೋಗ್ಯ ಮತ್ತು ವರ್ತಮಾನದ ಸ್ಥಿತಿಗತಿ
ಡಾ. (ಫ್ಲೈ| ಲೆ|) ಎಂ. ಎ. ಬಾಲಸುಬ್ರಹ್ಮಣ್ಯ, ಕಾರ್ಯದರ್ಶಿಗಳು ಮತ್ತು ಸಿಇಒ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್,
ಸರಗೂರು.
ಗೋಷ್ಠಿ – ನಾಲ್ಕು: ಮಧ್ಯಾಹ್ನ 12-00ರಿಂದ 1-30ರವರೆಗೆ
ಮಾಧ್ಯಮ ಮತ್ತು ಮಾನವ ಹಕ್ಕುಗಳು
ಶ್ರೀಮತಿ ಸಿ. ಜಿ. ಮಂಜುಳಾ, ಸಹ ಸಂಪಾದಕರು, ಪ್ರಜಾವಾಣಿ, ಬೆಂಗಳೂರು
ದಮನಿತ ಹಾಗೂ ನಿರ್ಲಕ್ಷಿತ ವರ್ಗಗಳ ಹಕ್ಕುಗಳ ಸಂರಕ್ಷಣೆ
ಪ್ರೊ. ಪಿ. ಎಲ್. ಧರ್ಮ, ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ
ಗುಂಪು ಸಂವಾದ: ಅಪರಾಹ್ನ 2-00ರಿಂದ 3-00ರವರೆಗೆವಿಚಾರ ಸಂಕಿರಣದ ವಿದ್ಯಾರ್ಥಿ ಪ್ರತಿನಿಧಿಗಳಿಂದ ಅಭಿಪ್ರಾಯ ಮಂಡನೆ
------------------------------------------------------------
ಸಮಾರೋಪ ಸಮಾರಂಭ: ಅಪರಾಹ್ನ 3-00ರಿಂದ 4-00ರವರೆಗೆ
ಸಮಾರೋಪ ಭಾಷಣ: ಶ್ರೀಮತಿ ಹೇಮಲತಾ ಮಹಿಷಿ, ಹಿರಿಯ ನ್ಯಾಯವಾದಿಗಳು ಮತ್ತು ಬರಹಗಾರರು, ಬೆಂಗಳೂರು
ಸಾಧ್ಯವಿದ್ದರೆ ನೀವು ಖಂಡಿತ ಇದರಲ್ಲಿ ಭಾಗವಹಿಸಿ. ಒಳ್ಳೆಯ ಚರ್ಚೆ ನಡೆಯಲು ಕಾರಣರಾಗಿ.
ಹೆಚ್ಚಿನ ವಿವರಗಳಿಗೆ: ಸಿಬಂತಿ ಪದ್ಮನಾಭ ಕೆ. ವಿ.ಸಂಘಟನಾ ಕಾರ್ಯದರ್ಶಿ (9449525854)