ಪ್ರಜಾವಾಣಿ | ಏಪ್ರಿಲ್ 27 ಹಾಗೂ 30, 2018ರಂದು ಪ್ರಕಟವಾದ ಲೇಖನಗಳು
ಪ್ರಜಾವಾಣಿ ಗ್ರಾಫಿಕ್ಸ್ |
ಪ್ರಜಾವಾಣಿ (27-04-2018) ಲಿಂಕ್ ಇಲ್ಲಿ ನೋಡಿ.
ಪ್ರಜಾವಾಣಿ (30-04-2018) ಇನ್ನೊಂದು ಲಿಂಕ್ ಇಲ್ಲಿ ನೋಡಿ.
ಯಾವುದೋ ಒಂದು ಪದವಿ ಪಡೆದರೆ ಸಾಕು, ಉದ್ಯೋಗ ಸಿಕ್ಕಿಬಿಡುತ್ತದೆ ಎಂಬ ನಮ್ಮ ಯುವಕರ ಸಾಂಪ್ರದಾಯಿಕ ಮನಸ್ಥಿತಿ ಬದಲಾಗುತ್ತಿದೆ. ಓದಿನ ಬಳಿಕ ನೌಕರಿ ಸಿಗುತ್ತದೆಯೇ ಎನ್ನುವುದನ್ನು ಅವರು ಗಂಭೀರವಾಗಿ ಯೋಚಿಸುತ್ತಿದ್ದಾರೆ. ಸಮೀಕ್ಷೆಗಳ ಪ್ರಕಾರ ಶೇ 47ರಷ್ಟು ಭಾರತೀಯ ಪದವೀಧರರು ಮಾತ್ರ ಉದ್ಯೋಗಾರ್ಹತೆ ಪಡೆದುಕೊಂಡಿದ್ದಾರೆ. ಹೀಗಾಗಿ ಉದ್ಯೋಗಾರ್ಹತೆ ಹೆಚ್ಚಿಸುವ ಕೋರ್ಸುಗಳಿಗೆ ಇಂದು ಹೆಚ್ಚಿನ ಬೇಡಿಕೆ.
ಪಿಯುಸಿ ಬಳಿಕ ಬಿಎ/ ಬಿಕಾಂ/ ಬಿಎಸ್ಸಿ ಇಲ್ಲವೇ ಎಂಜಿನಿಯರಿಂಗ್-ಮೆಡಿಕಲ್ ಪದವಿ ಎಂಬ ಸೀಮಿತ ಚೌಕಟ್ಟಿನಿಂದ ಈಚೆ ಬಂದು ಹೊಸ ಸಾಧ್ಯತೆಗಳತ್ತ ನಮ್ಮ ಯುವಕರು ಯೋಚಿಸುವ ಕಾಲ ಬಂದಿದೆ. ಇಲ್ಲಿ ಅಂತಹ ಐದು ಹೊಸ ಕ್ಷೇತ್ರಗಳ ವಿವರಗಳನ್ನು ನೀಡಲಾಗಿದೆ. ಕಷ್ಟಪಟ್ಟು ಓದುವುದಕ್ಕಿಂತಲೂ ಇಷ್ಟಪಟ್ಟು ಓದಿದರೆ ಭವಿಷ್ಯ ಭದ್ರ ಎಂದು ಯೋಚಿಸುವ ಸೃಜನಶೀಲ ಮನಸ್ಸುಳ್ಳವರಿಗೆ ಹೇಳಿ ಮಾಡಿಸಿದ ಕೋರ್ಸ್‌ಗಳು ಇಲ್ಲಿವೆ.
ಫ್ಯಾಷನ್/ಅಪಾರೆಲ್/ಟೆಕ್ಸ್‌ಟೈಲ್ ಡಿಸೈನಿಂಗ್
ಸಾಮಾನ್ಯ ಪೇಟೆಗಳಿಂದ ತೊಡಗಿ ಮಹಾನಗರಗಳವರೆಗೆ ದಿನೇದಿನೇ ಹೆಚ್ಚುತ್ತಲೇ ಇರುವ ವ್ಯಾಪಾರ ಬಟ್ಟೆಬರೆಗಳದ್ದು. ಆಬಾಲವೃದ್ಧರಾದಿಯಾಗಿ ಎಲ್ಲ ವಯಸ್ಸಿನ ಮಂದಿಯನ್ನೂ ಸೆಳೆಯುವ ಈ ಅಂಗಡಿಗಳಿಗೆ ಬೇಡಿಕೆ ಕಡಿಮೆಯಾದದ್ದೇ ಇಲ್ಲ. ಹೀಗಾಗಿ ಫ್ಯಾಷನ್ ಅಥವಾ ಟೆಕ್ಸ್‌ಟೈಲ್ ಡಿಸೈನಿಂಗ್ ಎಂದೂ ಜನಪ್ರಿಯತೆಯನ್ನು ಕಳೆದುಕೊಳ್ಳದ ಕ್ಷೇತ್ರ. ಜನ ಸದಾ ಹೊಸತಿಗೆ ಹಾತೊರೆಯುವ ಈ ಕಾಲದಲ್ಲಿ ಗ್ರಾಹಕರ ಅಭಿರುಚಿಗೆ ಅನುಗುಣವಾದ ಹೊಸ ಮಾದರಿಯ ಉಡುಗೆ-ತೊಡುಗೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಷ್ಟೂ ಸಾಲದು. ಕ್ರಿಯಾಶೀಲ ಯುವಕ-ಯುವತಿಯರಿಗೆ ಇದು ಹೇಳಿ ಮಾಡಿಸಿದ ಕ್ಷೇತ್ರ. ಫ್ಯಾಷನ್ ಡಿಸೈನ್ ಮತ್ತು ಸಂಬಂಧಿತ ವಿಷಯಗಳಲ್ಲಿ ಸರ್ಟಿಫಿಕೇಟ್, ಡಿಪ್ಲೊಮಾ, ಡಿಗ್ರಿ, ಪಿಜಿ ಡಿಪ್ಲೊಮಾ ನೀಡುವ ಅನೇಕ ಸಂಸ್ಥೆಗಳು ರಾಜ್ಯದಲ್ಲಿವೆ. ವಿವರಗಳಿಗೆ design.careers360.com, academiccourses.com ಜಾಲತಾಣಗಳನ್ನು ನೋಡಿ.

* ವೋಗ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ರಿಚ್ಮಂಡ್ ಸರ್ಕಲ್, ಬೆಂಗಳೂರು. ಫ್ಯಾಷನ್ ಡಿಸೈನಿಂಗ್‌ನಲ್ಲಿ ಸರ್ಟಿಫಿಕೇಟ್, ಡಿಪ್ಲೊಮಾ, ಪದವಿ ಮತ್ತು ಪಿ.ಜಿ. ಡಿಪ್ಲೊಮಾ ಕೋರ್ಸ್‌ಗಳು. ವೆಬ್‍ಸೈಟ್: voguefashioninstitute.com
* ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ವಿಜಯನಗರ, ಬೆಂಗಳೂರು. ಫ್ಯಾಶನ್ & ಅಪಾರೆಲ್ ಡಿಸೈನ್‌ನಲ್ಲಿ ಬಿಎಸ್ಸಿ, ಫ್ಯಾಷನ್ ಡಿಸೈನಿಂಗ್ ಅಂಡ್ ಬುಟೀಕ್ ಮ್ಯಾನೇಜ್ಮೆಂಟ್‌ನಲ್ಲಿ ಡಿಪ್ಲೊಮಾ. ವೆಬ್‍ಸೈಟ್: iiftbangalore.com
* ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು. ಆಕ್ಸೆಸರಿ ಡಿಸೈನ್, ಫ್ಯಾಷನ್ ಕಮ್ಯುನಿಕೇಶನ್, ಫ್ಯಾಷನ್ ಡಿಸೈನ್‌ನಲ್ಲಿ ಪ್ರತ್ಯೇಕ ಪದವಿಗಳು ಹಾಗೂ ಸ್ನಾತಕೋತ್ತರ ಕೋರ್ಸ್. ವೆಬ್‍ಸೈಟ್: nift.ac.in
* ಮಂಗಳೂರು ಇನ್‍ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಕಂಕನಾಡಿ, ಮಂಗಳೂರು. ಫ್ಯಾಷನ್ ಡಿಸೈನಿಂಗ್‌ನಲ್ಲಿ ಬಿಎಸ್ಸಿ ಪದವಿ. ವೆಬ್‍ಸೈಟ್: miftcollege.in
* ಮೈಸೂರು ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ವಿಜಯನಗರ, ಸಂಗಮ್ ವೃತ್ತ, ಮೈಸೂರು. ವೆಬ್‍ಸೈಟ್: www.mift.in
ಫೋಟೊಗ್ರಫಿ: ಮೂರನೇ ಕಣ್ಣು
ಅಪಾರ ಸಾಧ್ಯತೆಗಳಿರುವ ಕ್ಷೇತ್ರ ಛಾಯಾಗ್ರಹಣ. ಜಾಹೀರಾತು ಸಂಸ್ಥೆಗಳಿಂದ ಫ್ಯಾಷನ್ ರಂಗದವರೆಗೆ ಕ್ರಿಯಾಶೀಲ ಛಾಯಾಗ್ರಾಹಕರಿಗೆ ಇಂದು ಎಲ್ಲಿಲ್ಲದ ಬೇಡಿಕೆಯಿದೆ. ಮದುವೆಯಂತಹ ಕೌಟುಂಬಿಕ ಕಾರ್ಯಕ್ರಮಗಳಿಂದ ತೊಡಗಿ ಸಾರ್ವಜನಿಕ ಸಭೆ-ಸಮಾರಂಭಗಳವರೆಗೆ ಎಲ್ಲ ಸಂದರ್ಭಗಳಿಗೂ ಫೋಟೊ ಅನಿವಾರ್ಯವಾಗಿರುವುದರಿಂದ ಫೋಟೊಗ್ರಫಿಯನ್ನು ವೃತ್ತಿಯನ್ನಾಗಿ ಸ್ವೀಕರಿಸಿದವರಿಗೆ ಇಂದು ಬಿಡುವೇ ಇಲ್ಲ. ಅನೇಕ ಸಂಸ್ಥೆಗಳು ಛಾಯಾಗ್ರಹಣದಲ್ಲಿ ಡಿಪ್ಲೊಮಾ ಹಾಗೂ ಪದವಿ ಕೋರ್ಸುಗಳನ್ನು ಒದಗಿಸುತ್ತಿವೆ. ಫ್ಯಾಷನ್ ಫೋಟೊಗ್ರಫಿ, ಅಟೋಮೊಬೈಲ್ ಫೋಟೊಗ್ರಫಿ, ವೈಲ್ಡ್‌ಲೈಫ್ ಫೋಟೊಗ್ರಫಿ - ಹೀಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತಲೇ ಇವೆ. ವಿವರಗಳಿಗೆ goo.gl/qfsJsF, goo.gl/vYwEiW ಜಾಲತಾಣಗಳನ್ನು ನೋಡಿ.

* ಸೀಮ್‌ಎಜು ಸ್ಕೂಲ್ ಆಫ್ ಎಕ್ಸ್‌ಪ್ರೆಶನಿಸಂ, ಭುವನಗಿರಿ, ಒಎಂಬಿಆರ್ ಬಡಾವಣೆ, ಬೆಂಗಳೂರು. ಛಾಯಾಗ್ರಹಣದಲ್ಲಿ ಮೂರು ವರ್ಷದ ಬಿಎಸ್ಸಿ ಪದವಿ. ವೆಬ್‍ಸೈಟ್: seamedu.com
* ಜೆಡಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಲ್ಯಾವೆಲ್ಲೆ ರಸ್ತೆ, ಬೆಂಗಳೂರು. ಫ್ಯಾಷನ್ ಫೋಟೋಗ್ರಫಿಯಲ್ಲಿ ಡಿಪ್ಲೊಮಾ ಪದವಿ.
ದೃಷ್ಟಿ ಸ್ಕೂಲ್ ಆಫ್ ಫೋಟೋಗ್ರಫಿ, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಹೆಬ್ಬಾಳ, ಬೆಂಗಳೂರು.
ದೃಷ್ಟಿ ಸ್ಕೂಲ್ ಆಫ್ ಫೋಟೋಗ್ರಫಿ, ಕಾಫಿ ಬೋರ್ಡ್ ಲೇಔಟ್, ಕೆಂಪಾಪುರ, ಹೆಬ್ಬಾಳ, ಬೆಂಗಳೂರು.
ಹೊಸಬರಿಗೆ ವಾರಾಂತ್ಯದ ಕೋರ್ಸುಗಳು ಹಾಗೂ ಇತರರಿಗೆ 50 ದಿನಗಳ ಕೋರ್ಸ್. ವೆಬ್‍ಸೈಟ್: jdinstitute.com
ಸೌಂಡ್ ಎಂಜಿನಿಯರಿಂಗ್: ಶಬ್ದಪ್ರಸಂಗ
ಮನರಂಜನೆ ಬಹುಕೋಟಿ ಉದ್ಯಮವಾಗಿ ಬೆಳೆದಿರುವುದರಿಂದ ಕಳೆದೊಂದು ದಶಕದಿಂದ ಸೌಂಡ್ ಎಂಜಿನಿಯರಿಂಗ್ ತುಂಬ ಜನಪ್ರಿಯವೆನಿಸಿದೆ. ಚಲನಚಿತ್ರ (ಧ್ವನಿಪರಿಷ್ಕರಣೆ, ಧ್ವನಿಪರಿಣಾಮ), ಟೀವಿ ಕಾರ್ಯಕ್ರಮ ನಿರ್ಮಾಣ, ಜಾಹೀರಾತು, ಸಂಗೀತ ಕ್ಷೇತ್ರಗಳಲ್ಲಿ ಸೌಂಡ್ ಎಂಜಿನಿಯರ್‌ಗಳಿಗೆ ಭಾರೀ ಬೇಡಿಕೆಯಿದೆ. ಈ ವಿಷಯದಲ್ಲಿ ಡಿಪ್ಲೊಮಾ, ಬಿ.ಇ./ಬಿ.ಟೆಕ್. ಪದವಿಗಳನ್ನು ನೀಡುವ ಅನೇಕ ಸಂಸ್ಥೆಗಳಿವೆ. ವಿವರಗಳಿಗೆ audiolife.in, audioacademy.in ಜಾಲತಾಣಗಳನ್ನು ನೋಡಿ.

* ಸೀಮ್‌ಎಜು ಸ್ಕೂಲ್ ಆಫ್ ಎಕ್ಸ್‌ಪ್ರೆಶನಿಸಂ, ಭುವನಗಿರಿ, ಒಎಂಬಿಆರ್ ಬಡಾವಣೆ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್‌ನಲ್ಲಿ ಬಿ.ಎಸ್ಸಿ. ಪದವಿ.
* ಆಡಿಯೋ ಅಕಾಡೆಮಿ, ಆವಲಹಳ್ಳಿ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್‌ನ ವಿವಿಧ ವಿಷಯಗಳಲ್ಲಿ ಸಣ್ಣ ಅವಧಿಯ ಕೋರ್ಸ್‌ಗಳು. ವೆಬ್‍ಸೈಟ್: audioacademy.in
* ಆಡಿಯೋಲೈಫ್-ಇನ್‍ಸ್ಟಿಟ್ಯೂಟ್ ಆಫ್ ಸೌಂಡ್ ಎಂಜಿನಿಯರಿಂಗ್, ಜೆಪಿ ನಗರ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ ಮ್ಯೂಸಿಕ್ ಪ್ರೊಡಕ್ಷನ್‌ನಲ್ಲಿ ಸಣ್ಣ ಅವಧಿ ಹಾಗೂ ದೀರ್ಘಾವಧಿ ಕೋರ್ಸ್‌ಗಳು. ವೆಬ್‍ಸೈಟ್: audiolife.in
* ಎಎಟಿ ಮೀಡಿಯಾ ಕಾಲೇಜ್, ಮಲ್ಲೇಶ್ವರಂ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್‌ನಲ್ಲಿ ಪದವಿ,ಡಿಪ್ಲೊಮಾ ಕೋರ್ಸ್.
ಸಿಆರ್‌ಇಒ ವ್ಯಾಲಿ ಸ್ಕೂಲ್ ಆಫ್ ಕ್ರಿಯೇಟಿವಿಟಿ, ಡಿಸೈನ್ & ಮ್ಯಾನೇಜ್ಮೆಂಟ್, ಕೋರಮಂಗಲ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್‌ನಲ್ಲಿ ಅಂತರರಾಷ್ಟ್ರೀಯ ಮಾನ್ಯತೆಯ ಕೋರ್ಸ್‌ಗಳು. ವೆಬ್‍ಸೈಟ್: aatcollege.com
ಸಿಆರ್‌ಇಒ ವ್ಯಾಲಿ ಸ್ಕೂಲ್ ಆಫ್ ಕ್ರಿಯೇಟಿವಿಟಿ, ಡಿಸೈನ್ & ಮ್ಯಾನೇಜ್ಮೆಂಟ್, ಕೋರಮಂಗಲ, ಬೆಂಗಳೂರು. ಸೌಂಡ್ ಎಂಜಿನಿಯರಿಂಗ್‌ನಲ್ಲಿ ಅಂತರರಾಷ್ಟ್ರೀಯ ಮಾನ್ಯತೆಯ ಕೋರ್ಸ್‌ಗಳು. ವೆಬ್‍ಸೈಟ್: aatcollege.com
ಸಂಘಟನೆ-ಸಂಭ್ರಮದ ಇವೆಂಟ್ ಮ್ಯಾನೇಜ್‍ಮೆಂಟ್
ವಾರ್ಷಿಕೋತ್ಸವ, ರ‍್ಯಾಲಿ, ವಸ್ತುಪ್ರದರ್ಶನ ಇತ್ಯಾದಿ ಸಾರ್ವಜನಿಕ ಸಭೆ-ಸಮಾರಂಭಗಳಿಂದ ತೊಡಗಿ ಮದುವೆಯಂತಹ ಕೌಟುಂಬಿಕ ಕಾರ್ಯಕ್ರಮಗಳನ್ನೂ ಅಚ್ಚುಕಟ್ಟಾಗಿ ಆಯೋಜಿಸಿಕೊಡುವ ಇವೆಂಟ್ ಮ್ಯಾನೇಜ್‍ಮೆಂಟ್ ಕಂಪನಿಗಳಿಗೆ ಈಗ ಬಿಡುವಿಲ್ಲದ ಕೆಲಸ. ಕಾರ್ಯಕ್ರಮಗಳು ಸೊಗಸಾಗಿ ನಡೆಯಬೇಕು. ಆದರೆ ಅದರ ಆಯೋಜನೆಯ ಒತ್ತಡಗಳಿಂದ ದೂರವಿರಬೇಕು ಎಂದು ಬಯಸುವವರೇ ಹೆಚ್ಚಾಗಿರುವುದರಿಂದ ಇವೆಂಟ್ ಮ್ಯಾನೇಜರ್ಸ್‌ಗೆ ಭಾರೀ ಬೇಡಿಕೆ. ಈ ವಿಷಯದಲ್ಲಿ ಡಿಪ್ಲೊಮಾದಿಂದ ತೊಡಗಿ ಎಂಬಿಎ ವರೆಗೆ ಅನೇಕ ಬಗೆಯ ಕೋರ್ಸ್‌ಗಳನ್ನು ನೀಡುವ ಸಂಸ್ಥೆಗಳಿವೆ. ವಿವರಗಳಿಗೆ: niemindia.com, emdiworld.com/bengaluru ಜಾಲತಾಣಗಳನ್ನು ನೋಡಿ.

* ಇಎಂಡಿಐ ಇನ್‍ಸ್ಟಿಟ್ಯೂಟ್ ಆಫ್ ಇವೆಂಟ್ ಮ್ಯಾನೇಜ್‍ಮೆಂಟ್, ಇಂದಿರಾನಗರ, ಬೆಂಗಳೂರು. ಇವೆಂಟ್ ಮ್ಯಾನೇಜ್‍ಮೆಂಟ್ ಡಿಪ್ಲೊಮಾ ಮತ್ತು ಪಿಜಿ ಡಿಪ್ಲೊಮಾ ಕೋರ್ಸ್‌ಗಳು. ವೆಬ್‍ಸೈಟ್: emdiworld.com
* ಶಾರದಾ ವಿಕಾಸ್ ಟ್ರಸ್ಟ್, ಜಯನಗರ 4ನೇ ಬ್ಲಾಕ್, ಬೆಂಗಳೂರು. ಇವೆಂಟ್ ಮ್ಯಾನೇಜ್‍ಮೆಂಟ್‍ನಲ್ಲಿ ಡಿಪ್ಲೊಮಾ ಕೋರ್ಸ್.
* ಪಿಇಎಸ್ ವಿಶ್ವವಿದ್ಯಾಲಯ, ಬನಶಂಕರಿ 3ನೇ ಹಂತ, ಬೆಂಗಳೂರು. ಹಾಸ್ಪಿಟಾಲಿಟಿ & ಇವೆಂಟ್ ಮ್ಯಾನೇಜ್‍ಮೆಂಟ್‍ನಲ್ಲಿ ಬಿಬಿಎ ಪದವಿ. ವೆಬ್‍ಸೈಟ್: pes.edu
ನೋಟ ನವನವೀನ: ಇಂಟೀರಿಯರ್ ಡಿಸೈನ್
ಮನೆ-ಕಚೇರಿ ಕಟ್ಟಿಕೊಂಡರೆ ಸಾಲದು, ಅವು ಚೆನ್ನಾಗಿರಬೇಕು ಎಂದು ಬಯಸುವ ಜನರು ಹೆಚ್ಚು. ಹೀಗಾಗಿ ಇಂಟೀರಿಯರ್ ಡಿಸೈನಿಂಗ್ ದೊಡ್ಡ ಉದ್ಯಮವಾಗಿ ಬೆಳೆದಿದೆ. ಜನರ ಆಸಕ್ತಿ-ಅಭಿರುಚಿಗೆ ಅನುಗುಣವಾಗಿ ಒಳಾಂಗಣ ವಿನ್ಯಾಸ ಮಾಡುವವರು ಇಂದು ಬಹುಬೇಡಿಕೆಯಲ್ಲಿದ್ದಾರೆ. ಅಂತಹ ಮಂದಿಯನ್ನು ತರಬೇತುಗೊಳಿಸುವ ಸಾಕಷ್ಟು ಸಂಸ್ಥೆಗಳೂ ಹುಟ್ಟಿಕೊಂಡಿವೆ. ವಿವರಗಳಿಗೆ plancareer.org, www.bsd.edu.in ಜಾಲತಾಣಗಳನ್ನು ನೋಡಿ.

* ಬೆಂಗಳೂರು ಸ್ಕೂಲ್ ಆಫ್ ಡಿಸೈನ್, ಕೆ. ನಾರಾಯಣಪುರ, ಕೊತ್ತನೂರು, ಬೆಂಗಳೂರು. ಇಂಟೀರಿಯರ್ ಡಿಸೈನ್‌ನಲ್ಲಿ ಬಿ.ಎಸ್ಸಿ. ಹಾಗೂ ಡಿಪ್ಲೊಮ ಕೋರ್ಸ್‌ಗಳು. ವೆಬ್‍ಸೈಟ್: bsd.edu.in
* ನಿಟ್ಟೆ ಸ್ಕೂಲ್ ಆಫ್ ಫ್ಯಾಶನ್ ಟೆಕ್ನಾಲಜಿ & ಇಂಟೀರಿಯರ್ ಡಿಸೈನ್, ಯಲಹಂಕ, ಬೆಂಗಳೂರು. ಇಂಟೀರಿಯರ್ ಡಿಸೈನ್ & ಡೆಕೋರೇಶನ್‌ನಲ್ಲಿ ಬಿ.ಎಸ್ಸಿ. ಪದವಿ. ವೆಬ್‍ಸೈಟ್: nitteftid.com
* ಇಂಟರ್‌ನ್ಯಾಶನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಶನ್ ಡಿಸೈನ್, ಎಚ್‌ಎಸ್‌ಆರ್ ಲೇಔಟ್ ಹಾಗೂ ಎಂಜಿ ರಸ್ತೆ, ಬೆಂಗಳೂರು. ಇಂಟೀರಿಯರ್ ಡಿಸೈನ್‌ನಲ್ಲಿ ಬಿ.ಎಸ್ಸಿ. ಪದವಿ. ವೆಬ್‍ಸೈಟ್: iiftbangalore.com
* ಎನಿಮಾಸ್ಟರ್, ಗುಟ್ಟಹಳ್ಳಿ, ಬೆಂಗಳೂರು. ಬ್ಯಾಚಿಲರ್ ಆಫ್ ವಿಶುವಲ್ ಆರ್ಟ್ಸ್ ಇನ್ ಇಂಟೀರಿಯರ್ & ಸ್ಪೇಶಿಯಲ್ ಡಿಸೈನ್.
* ಮೈಸೂರು ಇಂಟೀರಿಯರ್ಸ್ & ಡಿಸೈನ್ಸ್ ಅಕಾಡೆಮಿ, ಕುವೆಂಪುನಗರ, ಮೈಸೂರು. ಇಂಟೀರಿಯರ್ ಡಿಸೈನ್‌ನಲ್ಲಿ ಬಿ.ಎಸ್ಸಿ. ಮತ್ತು ಸಣ್ಣ ಅವಧಿಯ ಕೋರ್ಸ್‌ಗಳು. ವೆಬ್‍ಸೈಟ್: animaster.com
ಜ್ಯುವೆಲ್ಲರಿ ಡಿಸೈನ್: ಚಿನ್ನದ ಚೆಂದದ ಲೋಕ
ಆಭರಣ ಮಳಿಗೆಗಳೂ, ಒಡವೆಗಳ ಖರೀದಿದಾರರೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದಾರೆ. ಅಂದರೆ ಹೊಸ ವಿನ್ಯಾಸಗಳನ್ನು ಸೃಜಿಸುವವರೂ ಮಾರುಕಟ್ಟೆಗೆ ಪರಿಚಯಿಸುವವರೂ ದೊಡ್ಡ ಸಂಖ್ಯೆಯಲ್ಲಿ ಬೇಕಾಗಿದ್ದಾರೆ ಎಂದರ್ಥ. ಆಭರಣ ವಿನ್ಯಾಸದಲ್ಲಿ ಡಿಪ್ಲೊಮಾ ಮತ್ತು ಪದವಿ ನೀಡುವ ಹತ್ತಾರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ವಿವರಗಳಿಗೆ ನೋಡಿ: goo.gl/Vswq5n, goo.gl/7xuWFp
* ವೋಗ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ರಿಚ್ಮಂಡ್ ಸರ್ಕಲ್, ಬೆಂಗಳೂರು. ಮಾಹಿತಿಗೆ: voguefashioninstitute.com
* ಜೆಡಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ, ಬೆಂಗಳೂರು (ಜಯನಗರ, ಇಂದಿರಾನಗರ, ಲ್ಯಾವೆಲ್ಲೆ ರಸ್ತೆ, ಯಲಹಂಕ ಕೇಂದ್ರಗಳಿವೆ). ಮಾಹಿತಿಗೆ: jdinstitute.com
* ಸ್ವರ್ಣ ಇನ್‌ಸ್ಟಿಟ್ಯೂಟ್ ಆಫ್ ಜ್ಯುವೆಲ್ಲರಿ ಡಿಸೈನಿಂಗ್, 7ನೇ ಬ್ಲಾಕ್ (ಪಶ್ಚಿಮ), ಜಯನಗರ, ಬೆಂಗಳೂರು. ಮಾಹಿತಿಗೆ: swarnaacademy.co.in
* ಡ್ರೀಮ್‌ಜೋನ್ (ಮೈಸೂರು, ಮಂಗಳೂರು ಹಾಗೂ ಬೆಂಗಳೂರಿನ ಇಂದಿರಾನಗರ, ಬಸವೇಶ್ವರನಗರ, ಸದಾಶಿವನಗರ ಮುಂತಾದ ಕಡೆ ಕೇಂದ್ರಗಳಿವೆ). ಮಾಹಿತಿಗೆ: dreamzone.co.in
ರುಚಿಮೀಮಾಂಸೆ: ಪಾಕವಿದ್ಯೆಗೂ ಪದವಿ
ಆತಿಥ್ಯವೇ ಉದ್ಯಮವಾಗಿ ಬೆಳೆದಿರುವ ಕಾಲವಿದು. ಹೀಗಾಗಿ ಹೋಟೆಲ್ ಮ್ಯಾನೇಜ್‍ಮೆಂಟಿನಿಂದಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಪಾಕಶಾಸ್ತ್ರದಲ್ಲೇ ಪದವಿ ನೀಡುವ ಪದ್ಧತಿ ಜನಪ್ರಿಯವಾಗುತ್ತಿದೆ. ಕ್ಯುಲಿನರಿ ಆರ್ಟ್ಸ್‌ನಲ್ಲಿ ಡಿಪ್ಲೊಮಾ ಹಾಗೂ ಬಿ.ವೋಕ್ ಕೋರ್ಸ್‌ಗಳನ್ನು ಮಾಡುವುದಕ್ಕೆ ನಗರಗಳಲ್ಲಿ ಹೇರಳ ಅವಕಾಶಗಳಿವೆ. ವಿವರಗಳಿಗೆ bangaloreculinaryacademy.com, studyask.com ಜಾಲತಾಣಗಳನ್ನು ನೋಡಿ.

* ಎಎಸ್‌ಕೆ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಮ್ಯಾನೇಜ್‍ಮೆಂಟ್ & ಕ್ಯುಲಿನರಿ ಆರ್ಟ್ಸ್, ಸಿಂಗಸಂದ್ರ, ಬೆಂಗಳೂರು. ಪಾಕಕಲೆ, ಆತಿಥ್ಯ ನಿರ್ವಹಣೆ ಮತ್ತು ಹೊಟೇಲ್ ಆಡಳಿತದಲ್ಲಿ ಡಿಪ್ಲೊಮಾ ಮತ್ತು ಪದವಿ ಕೋರ್ಸುಗಳು. ಮಾಹಿತಿಗೆ: studyask.com
* ಬೆಂಗಳೂರು ಕ್ಯುಲಿನರಿ ಅಕಾಡೆಮಿ, ಕೆಂಪಾಪುರ, ಭುವನೇಶ್ವರಿನಗರ, ಬೆಂಗಳೂರು. ಪಾಕಶಾಸ್ತ್ರ ಮತ್ತು ಆಹಾರ ತಯಾರಿ, ಹೊಟೇಲ್ ಮ್ಯಾನೇಜ್‍ಮೆಂಟಿನಲ್ಲಿ ಡಿಪ್ಲೊಮಾ ಕೋರ್ಸ್‌ಗಳು. ಮಾಹಿತಿಗೆ: bangaloreculinaryacademy.com
* ಎಂ.ಎಸ್. ರಾಮಯ್ಯ ಯುನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ಎಂಎಸ್‌ಆರ್ ನಗರ, ಬೆಂಗಳೂರು. ಕ್ಯುಲಿನರಿ ಆಪರೇಷನ್ಸ್‌ನಲ್ಲಿ ಬಿ.ವೋಕ್ ಪದವಿ. ಮಾಹಿತಿಗೆ: msruas.ac.in
* ಮಣಿಪಾಲ ವಿಶ್ವವಿದ್ಯಾಲಯ, ಮಣಿಪಾಲ. ಪಾಕಕಲೆಯಲ್ಲಿ ಬಿಎ ಪದವಿ ಹಾಗೂ ಹೋಟೆಲ್ ನಿರ್ವಹಣೆಯಲ್ಲಿ ಬಿಎಚ್‌ಎಂ ಪದವಿ. ಮಾಹಿತಿಗೆ: manipal.edu/mu.html
* ಕರಾವಳಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್ (karavalicollege.com/?page_id=1119) ಹಾಗೂ ಶ್ರೀದೇವಿ ಕಾಲೇಜ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್, ಮಂಗಳೂರು (hm.sdc.ac.in). ಹೋಟೆಲ್ ಮ್ಯಾನೇಜ್‍ಮೆಂಟ್‍ನಲ್ಲಿ ಡಿಪ್ಲೊಮಾ ಮತ್ತು ಡಿಗ್ರಿ ಕೋರ್ಸ್‌ಗಳು.
ಅನಿಮೇಷನ್/ ಮಲ್ಟಿಮೀಡಿಯ/ ಗ್ರಾಫಿಕ್ಸ್ ಡಿಸೈನ್:
ಅನಿಮೇಷನ್ ಆಧಾರಿತ ಸಿನಿಮಾ ಹಾಗೂ ಟೀವಿ ಕಾರ್ಯಕ್ರಮಗಳಿಗೆ ನಮ್ಮಲ್ಲೇ ಅಪಾರ ಬೇಡಿಕೆಯಿದೆ. ಜೊತೆಗೆ, ಅನೇಕ ದೇಶಗಳು ಅನಿಮೇಶನ್‌ಗಾಗಿ ಭಾರತವನ್ನು ಅವಲಂಬಿಸಿವೆ. ಅನಿಮೇಷನ್, ಮಲ್ಟಿಮೀಡಿಯಾ, ಗ್ರಾಫಿಕ್ಸ್ ಡಿಸೈನಿಂಗ್‌ನಲ್ಲಿ ಪದವಿ ಪಡೆಯುವವರಿಗೆ ಹೇರಳ ಅವಕಾಶಗಳಿವೆ: ವಿವರಗಳಿಗೆ arena-multimedia.com ಮತ್ತು maacindia.com ಜಾಲತಾಣಗಳನ್ನು ನೋಡಿ.
* ಅನಿಮಾಸ್ಟರ್, ಗುಟ್ಟಹಳ್ಳಿ, ಬೆಂಗಳೂರು. ಅನಿಮೇಷನ್ & ಮಲ್ಟಿಮೀಡಿಯ ಡಿಸೈನ್‌ನಲ್ಲಿ ಬಿವಿಎ ಪದವಿ. ಮಾಹಿತಿಗೆ: animaster.com
* ಅರೆನಾ ಅನಿಮೇಷನ್, ಬೆಂಗಳೂರು. ರಾಜ್ಯದ ಸುಮಾರು 20 ಕಡೆ ತರಬೇತಿ ಕೇಂದ್ರಗಳಿವೆ. ಅನಿಮೇಷನ್-ಮಲ್ಟಿಮೀಡಿಯ ಸಂಬಂಧಿಸಿದಂತೆ ಪದವಿ ಹಾಗೂ ಅಲ್ಪಾವಧಿಯ ಕೋರ್ಸ್‌ಗಳು. ಮಾಹಿತಿಗೆ: arena-multimedia.com/arena-centre-karnataka.aspx
* ಮಾಯಾ ಅಕಾಡೆಮಿ ಆಫ್ ಅಡ್ವಾನ್ಸ್‌ಡ್ ಸಿನಿಮಾಟಿಕ್ಸ್ (ಮ್ಯಾಕ್), ಬೆಂಗಳೂರು. ಕತ್ರಿಗುಪ್ಪೆ, ಮಲ್ಲೇಶ್ವರಂ, ಜಯನಗರ ಸೇರಿದಂತೆ ಬೆಂಗಳೂರಿನ ಹಲವೆಡೆ ಹಾಗೂ ಮಂಗಳೂರು, ಮೈಸೂರುಗಳಲ್ಲಿ ಕೇಂದ್ರಗಳಿವೆ. 3ಡಿ ಅನಿಮೇಷನ್, ವಿಎಫ್‌ಎಕ್ಸ್, ಮಲ್ಟಿಮೀಡಿಯ & ಡಿಸೈನ್ ಸಂಬಂಧಿಸಿದ ಕೋರ್ಸ್‌ಗಳು. ಮಾಹಿತಿಗೆ: maacindia.com
ಮಾಧ್ಯಮ ಜಗತ್ತು!:
ಪತ್ರಿಕೆ, ಟಿ.ವಿ.ಯಂತಹ ಸಾಂಪ್ರದಾಯಿಕ ಮಾಧ್ಯಮಗಳ ಜೊತೆಗೆ, ಅಂತರ್ಜಾಲ, ಸಿನಿಮಾ, ಜಾಹೀರಾತು, ಸಾರ್ವಜನಿಕ ಸಂಪರ್ಕ ಕ್ಷೇತ್ರಗಳು ವಿಸ್ತಾರವಾಗಿ ಬೆಳೆದಿರುವುದರಿಂದ ಪತ್ರಿಕೋದ್ಯಮ/ ಮಾಧ್ಯಮ ಅಧ್ಯಯನದಲ್ಲಿ ಒಳ್ಳೆಯ ತರಬೇತಿ ಪಡೆದವರಿಗೆ ಬೇಡಿಕೆಯಿದೆ. ವಿವರಗಳಿಗೆ goo.gl/Blcz5N ಮತ್ತು iijnm.org ಜಾಲತಾಣಗಳನ್ನು ನೋಡಿ.
ಕರ್ನಾಟಕದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಗಳಿವೆ. ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಜರ್ನಲಿಸಂ & ನ್ಯೂ ಮೀಡಿಯಾದಂತಹ ಖಾಸಗಿ ಸಂಸ್ಥೆಗಳಿವೆ. ಪದವಿ ಹಂತದಲ್ಲಿ ಪತ್ರಿಕೋದ್ಯಮವನ್ನು ಕಲಿಸುವ ಸುಮಾರು 150 ಕಾಲೇಜುಗಳು ಕರ್ನಾಟಕದಲ್ಲಿವೆ.
ಡಿಜಿಟಲ್ ಮಾರ್ಕೆಟಿಂಗ್
ಜಗತ್ತೆಲ್ಲ ಡಿಜಿಟಲ್ ಆಗಿರುವ ಹೊಸ ಕಾಲದಲ್ಲಿ ಸಣ್ಣ-ದೊಡ್ಡ ಉದ್ದಿಮೆಗಳಲ್ಲಿರುವವರೂ ಆನ್‌ಲೈನ್ ತಂತ್ರಜ್ಞಾನ ಅವಲಂಬಿಸದೆ ಬೇರೆ ದಾರಿಯಿಲ್ಲ. ವಿಡಿಯೊ/ಆಡಿಯೊ ಜಾಹೀರಾತುಗಳಿಂದ ತೊಡಗಿ ಇಂಟರ‍್ಯಾಕ್ಟಿವ್ ತಂತ್ರಜ್ಞಾನ, ಮೊಬೈಲ್ ಮಾರ್ಕೆಟಿಂಗ್, ಸರ್ಚ್ ಎಂಜಿನ್ ಮಾರ್ಕೆಟಿಂಗ್, ಸಾಮಾಜಿಕ ಮಾಧ್ಯಮಗಳ ಬಳಕೆ, ಇ-ಕಾಮರ್ಸ್, ಇ-ಮೇಲ್ ಮಾರ್ಕೆಟಿಂಗ್, ವೆಬ್ ಡಿಸೈನಿಂಗ್, ಕಂಟೆಂಟ್ ಮ್ಯಾನೇಜ್‍ಮೆಂಟ್ ಇತ್ಯಾದಿಗಳು ಇಂದು ಅನಿವಾರ್ಯವಾಗಿವೆ. ಇದಕ್ಕೆಂದೇ ಹಲವು ಕೋರ್ಸ್‌ಗಳೂ ಬಂದಿವೆ. ವಿವರಗಳಿಗೆ: digitalacademy360.com ಮತ್ತು goo.gl/hHGmis ಜಾಲತಾಣಗಳನ್ನು ನೋಡಿ.
* ಡಿಜಿಟಲ್ ಅಕಾಡೆಮಿ 360 - ಬೆಂಗಳೂರಿನಲ್ಲಿ ಜಯನಗರ, ಇಂದಿರಾನಗರ, ಮಲ್ಲೇಶ್ವರಂ ಮತ್ತಿತರ ಕಡೆ ಕೇಂದ್ರಗಳಿವೆ. ವಿವಿಧ ಬಗೆಯ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಟ್ ಕೋರ್ಸುಗಳು. ಮಾಹಿತಿಗೆ: digitalacademy360.com
* ಇಂಟರ್‌ನೆಟ್ & ಮೊಬೈಲ್ ರಿಸರ್ಚ್ ಇನ್‍ಸ್ಟಿಟ್ಯೂಟ್, ಎಂ.ಜಿ. ರಸ್ತೆ, ಬೆಂಗಳೂರು. ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಡಿಜಿಟಲ್ ಅನಾಲಿಟಿಕ್ಸ್ ಕೋರ್ಸ್‌ಗಳು. ಮಾಹಿತಿಗೆ: imri.in
* ಡಿಜಿಟಲ್ ಲವ್, ಎಚ್‌ಎಸ್‌ಆರ್ ಲೇಔಟ್, ಬೆಂಗಳೂರು. ಡಿಜಿಟಲ್ ಮಾರ್ಕೆಟಿಂಗ್ ತರಬೇತಿ. ಮಾಹಿತಿಗೆ: digitallove.in
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ