... ಕಡಲ ಪುಂಡಾಟಿಕೆ ಏರುತ್ತಿರುವುದು ನೋಡಿದರೆ ಇನ್ನೆರಡು ದಿನಗಳಲ್ಲಿ ತಾವೆಲ್ಲರೂ ಗೋರ್ಮೆಂಟಿನ ಗಂಜಿಕೇಂದ್ರದಲ್ಲಿ ಠಿಕಾಣಿ ಹೂಡುವ ಪರಿಸ್ಥಿತಿ ಬರುವುದು ನಿಶ್ಚಯವೆಂದೆನಿಸಿತು ಯಾದವನಿಗೆ. ಈಗಲೇ ದಿನಬೆಳಗಾದರೆ ಹಸಿಮೀನಿಗೆ ಮುತ್ತುವ ಕಾಗೆಗಳ ಥರ ಸಾಲೋಸಾಲು ಬಂದು ಫೋಟೋ ತೆಗೆಯುವ ಪೇಪರಿನವರ ಅವಸ್ಥೆ ಹೇಳಿ ಪ್ರಯೋಜನವಿಲ್ಲ. ’ಎಷ್ಟು ವರ್ಷದಿಂದ ಈ ಥರ ಇದೆ? ಈ ವರ್ಷ ಎಷ್ಟು ತೆಂಗಿನ ಮರ ಹೋಯ್ತು? ಪರಿಹಾರ ಸಿಕ್ಕಿತಾ? ಈ ಸರ್ತಿ ಎಷ್ಟು ಲೋಡು ಕಲ್ಲು ಹಾಕಿದ್ದಾರೆ ದಂಡೆಗೆ?’ ಎಂಬಿತ್ಯಾದಿ ಹತ್ತಾರು ಪ್ರಶ್ನೆಗಳಿಗೆ ಯಾದವ ಮತ್ತವನ ನೆರೆಹೊರೆಯವರು ನೂರಾರು ಬಾರಿ ಉತ್ತರ ಹೇಳಿರಬಹುದು. ಕೆಲವು ಕೆಮರಾದವರಂತೂ ಫೋಟೋ ತೆಗೆಯಲಿಕ್ಕಂತಲೇ ಅರ್ಧ ಚಿಂದಿಯಾದ ಜೋಪಡಿ, ದೋಣಿಗಳ ಪಕ್ಕ ಪುಟ್ಟ ಮಕ್ಕಳನ್ನೋ ಹೆಂಗಸರನ್ನೋ ಕರೆದು ನಿಲ್ಲಿಸುವ ಆತುರ ನೋಡಿ ’ಮನುಷ್ಯತ್ವ ಇಲ್ಲಾ ಇವರಿಗೆ? ಪರಿಕ್ಕಟೆ ಮನೆ ಹತ್ರ ನಿಲ್ಲಿಸಿ ಕಣ್ಣೀರು ಕಾಕಿದ್ರೆ ಫೋಟೋದಲ್ಲಿ ಭಾರಿ ಚಂದವಾ?’ ಎಂದು ಎಷ್ಟೋ ಸಲ ಶಪಿಸಿಕೊಂಡಿದ್ದ ಯಾದವ. ನಾಳೆ ನಾಡಿದ್ದು ಗಂಜಿ ಕೇಂದ್ರಕ್ಕೆ ನಾವೂ ರವಾನೆಯಾಗ್ತೇವೆ, ಅಲ್ಲಿ ಮಕ್ಕಳು ಮರಿಗಳೆಲ್ಲ ಸೇರಿ ತಟ್ಟೆ ಹಿಡಿಯೋ ಹೊತ್ತಿಗೇ ಈ ಎಮ್ಮೆಲ್ಲೆ ಮಂತ್ರಿಗಳಿಗೆ ಬರೋ ಪುರುಸೊತ್ತಾಗುತ್ತೆ. ಅವರು ನಮ್ಮ ಅವಸ್ಥೆ ಅವ್ಯವಸ್ಥೆ ಕಂಡು ಬೇಜಾರಾಗಿ ಕಣ್ಣೀರು ಸುರಿಸೋ ಸಮಯಕ್ಕೆ ಸರಿಯಾಗಿ ಕೆಮರಾದವರು ಫೋಟೋ ತೆಗೀತಾರೆ. ಮರುದಿನ ಪೇಪರುಗಳಲ್ಲಿ ಯಥಾಪ್ರಕಾರ ಸುದ್ದಿ, ಸುದ್ದಿ, ಸುದ್ದಿ... ನಿಡುಸುಯ್ದ ಯಾದವ...
* * *
ಡಿಸೆಂಬರ್ ೨೦೦೯ ರ ’ಮಯೂರ’ದಲ್ಲಿ ನನ್ನ ಕಥೆ ’ತೀರದ ತೀರ್ಪು’ ಪ್ರಕಟವಾಗಿದೆ. ಇದು ನನ್ನ ಮೊದಲ ಪ್ರಕಟಿತ ಕಥೆ. ಪ್ರಕಟಿಸಿರುವ ಸಂಪಾದಕರಿಗೆ ಆಭಾರಿ ಅನ್ನಲೇಬೇಕು. ಅಂದಹಾಗೆ, ಮೇಲಿನದ್ದು ಅದರ ನಡುವಿಂದ ಹೆಕ್ಕಿದ ಒಂದು ಪ್ಯಾರಾ. ’ಮಯೂರ’ ಈಗ ಇಂಟರ್ನೆಟ್ಟಲ್ಲೂ ಲಭ್ಯವಿರುವುದರಿಂದ ( mayuraezine.com ) ಮತ್ತೊಮ್ಮೆ ಇಡೀ ಕಥೆಯನ್ನು ಇಲ್ಲಿ ಟೈಪಿಸುವುದಿಲ್ಲ. ದಯವಿಟ್ಟು ಪುರುಸೊತ್ತು ಮಾಡಿ ಓದಿ ನಿಮ್ಮ ಅಭಿಪ್ರಾಯ ಹೇಳಿ. ಕಾಯುವೆ.
5 ಕಾಮೆಂಟ್ಗಳು:
chenda aidu. kathe odide. laika baradde...
shall read for sure. but give me some time pls....
ಪ್ರಿಯ ಮನೋರಮಾ ಮತ್ತು ಮಿಂಚುಳ್ಳಿ, ಧನ್ಯವಾದಗಳು ನಿಮಗೆ.
ತಮ್ಮಾ.... ಅರ್ಧ ಕತೆ ಓದಿಯೆ ತುಂಬಾ ಬೇಜಾರಾತು. ಪೂರ್ತಿ ಓದುಲೆಡಿಯದಾಳಿ ಕಾಣ್ತು. ಟ್ರೈ ಮಾಡ್ತೆ. ಎನಗೆ ಇಂಡರ್ಣೆಟ್ಟಿಲಿ ಓದುದು ಅಶ್ಟಕ್ಕಶ್ಟೆ. ಹಾಂಗಾಗಿ ಪುಸ್ತಕ ಎಲ್ಲಿಯಾದರೂ ಓಸಿಲಿ ಸಿಕ್ಕುತ್ತಾ ನೋಡ್ತೆ...:)
very nice...... I liked the story.
ಕಾಮೆಂಟ್ ಪೋಸ್ಟ್ ಮಾಡಿ